ಗುರುವಾರ, ಏಪ್ರಿಲ್ 2, 2015

ನಮ್ಮ ದೇಶರ ಹೆಸರುಗಳಮೇಲೆ ವಿದೇಶಿಯರ ಆಕ್ರಮಣ

ನಮಸ್ಕಾರ, ಈ ನನ್ನ ಲೇಖನ ಯಾವುದೇ ಧರ್ಮದ, ಭಾಷೆಯ ಜನರ ಮನಸ್ಸನ್ನು ನೋಯಿಸುವ ಉದ್ದೇಶದಿಂದ ಬರೆದಿದ್ದಲ್ಲ. ಕೇವಲ ಭಾರತದ ಹಿರಿಮೆ, ಸಂಸ್ಕೃತಿ,  ನಂಬಿಕೆಯ ಮೇಲೆ ಅನ್ಯರ ಆಕ್ರಮಣದ ಪ್ರಭಾವವನ್ನು ವಿವರಿಸುವುದು ಅಷ್ಟೇ.

ಸುಮಾರು ಎರಡುಸಾವಿರ ವರ್ಷಗಳಿಂದ ಭಾರತ ನಿರಂತರ ಧಾಳಿಗೊಳಗಾಡಿದೆ. ಆಂಗ್ಲರು, ಪೋರ್ಚುಗೀಸರು, ಡಚ್ಚರು, ಫ್ರೆಂಚರು, ಇಸ್ಲಾಂ ಆಕ್ರಮಣಕಾರರು, ಆರಬ್ಬರು ಹೀಗೆ ವಿವಿಧ ಕಾಲಘಟ್ಟದಲ್ಲಿ ಸಮಯ ದೊರೆತಾಗಲೆಲ್ಲಾ ಆಕ್ರಮಣಗೈದಿದ್ದಾರೆ. ಲೂಟಿ ಹೊಡೆದಿದ್ದಾರೆ. ಮತಾಂತರ, ನಾಮಾಂತರ ಮಾಡಿದ್ದಾರೆ.

ಭಾರತವನ್ನು ಆಂಗ್ಲ ಭಾಷೆಯಲ್ಲಿ ಇಂಡಿಯಾ ಅಂತ ಕರೀತೀವಿ. ಅದಕ್ಕೆ ಕಾರಣ ಅಲೆಗ್ಸ್ಯಾಂಡರ್ ದಿ ಗ್ರೇಟ್. ಕ್ರಿಸ್ತ ಪೂರ್ವ 326 ರಲ್ಲಿ ಭಾರತದಮೇಲೆ ಆಕ್ರಮಣ ಮಾಡಿದ ಅಲೆಗ್ಸ್ಯಾಂಡರ್, ಭಾರತದ ವಾಯುವ್ಯದಲ್ಲಿ ಹರಿಯುತ್ತಿದ್ದ ಸಿಂಧೂ ನದಿಯನ್ನ ನೋಡಿದ. ಅವನಿಗೆ ಅದರ ಹೆಸರು ಉಚ್ಚಾರ ಮಾಡಲಿಕ್ಕೆ ಆಗ್ಲಿಲ್ಲ. ಅವನು ಸಿಂಧೂ ನದಿಯನ್ನ ಇಂಡೋಸ್ ಎಂದು ಕರೆದ. ಸಿಂಧೂ ಅಂದ್ರೆ ಮಂಗಳಕರ ಅಂತ. ಕೊನೆಗೆ ಇಂಡೋಸ್ ಹೋಗಿ, ಇಂಡಸ್, ಇಂಡಿಯಾ ಆಯ್ತು. ಭರತನ ಹೆಸರಿನಿಂದ ಕರೆಯಲ್ಪಡುವ ಭಾರತ ಅನ್ಯರ ಧಾಳಿಯಿಂದ ಇಂಡಿಯಾ ಆಯ್ತು.

ಕಾಳಿದಾಸನ ಕುಮಾರಸಂಭವದ ಮೊದಲ ಶ್ಲೋಕ ಹಿಮಾಲಯದ ವರ್ಣನೆಗೆ ಮೀಸಲು.

ಅಸ್ಥುತ್ತರಸ್ಯಾಮ್  ದಿಶಿ ದೇವತಾತ್ಮಾ ಹಿಮಾಲಯೊ ನಾಮ ನಗಾಧಿರಾಜಃ|
ಪೂರ್ವಾಪರೌ ತೋಯನಿಧಿವಗಾಹ್ಯ ಸ್ಥಿತ ಪೃಥಿವ್ಯಾ ಇವ ಮಾನದಂಡಃ ||

ಉತ್ತರದಲ್ಲಿರುವ ಪರ್ವತಗಳ ರಾಜ ಹಿಮಾಲಯ ಭೂಮಿಯ ಅಳತೆಗೋಲಂತೆ.

ಇಂಥ ಹಿಮಾಲಯದಲ್ಲಿರುವ ಪ್ರಪಂಚದ ಅತ್ಯಂತ ಎತ್ತರ ಪರ್ವತ, ಮೌಂಟ್ ಎವರೆಸ್ಟ್. ಮೌಂಟ್ ಎವರೆಸ್ಟ್ ಗೆ ನಮ್ಮ ಪೂರ್ವಜರು ಕರೆದಿದ್ದು ಸಾಗರಮಾತ ಅಂತ. ಸಾಗರಮಾತ ಅಂದ್ರೆ ಪರ್ವತಗಳ ರಾಜ, ಗೌರೀಶಂಕರ ಅನ್ನೋ ಹೆಸರಿಂದನೂ ಕರೀತೀವಿ. 28 ಸಾವಿರಕ್ಕೂ ಅಡಿ ಎತ್ತರವಿರುವ ಕಾಂಚನಗಂಗ 3ನೇ ಎತ್ತರದ ಪರ್ವತ. ಇದು ಅನ್ಯರ ಬಾಯಲ್ಲಿ ಕಾಂಚನಜುಂಗಾ ಆಯ್ತು.

ಭಾರತದ ಅಕ್ಕ ಪಕ್ಕದಲ್ಲಿರುವ ಬಂಗಾಳ ಕೊಲ್ಲಿ ಮತ್ತು ಅರಬ್ಬೀ ಸಮುದ್ರಕ್ಕೆ ನಮ್ಮ ಪೂರ್ವಜರು ಇಟ್ಟಿದ್ದ ಹೆಸರು ರತ್ನಾಕರ ಮತ್ತು ಮಹೋದಧಿ. ರತ್ನಾಕರ ಅರಬ್ಬೀ ಸಮುದ್ರ ಆದ್ರೆ, ಮಹೋದಧಿ ಬಂಗಾಳ ಕೊಲ್ಲಿ ಆಯ್ತು.

ಬಂಗಾಳದ ಕಾಲಿಘಾಟ್ ಕಲ್ಕತ್ತಾ ಆಗಿದೆ. ಶಿವನ ಶಕ್ತಿಪೀತ ದುರ್ಜಯಲಿಂಗ ಡಾರ್ಜೀಲಿಂಗ್ ಆಗಿದೆ.

ಇನ್ನು ನಮ್ಮ ಕರ್ನಾಟಕದ ಮಟ್ಟಿಗೆ ಹೇಳೋದಾದ್ರೆ ಪೋರ್ಚುಗೀಸರ ಪ್ರಭಾವದಿಂದ ಕನ್ನಡ  ಕೆನರಾ ಆಯ್ತು. ಅವಿಭಜಿತ ಕನ್ನಡ ಜಿಲ್ಲೆ ಸೌತ್ ಕೆನರಾ ಮತ್ತು ನಾರ್ತ್ ಕೆನರಾ ಆಯ್ತು. ಬ್ರಿಟೀಷರ ವಶದಲ್ಲಿದ್ದ ಕೊಡಗು ಕೂರ್ಗ್ ಆಯ್ತು, ಮಡಿಕೇರಿ ಮಾರ್ಕೇರಾ ಆಯ್ತು.

ಇಸ್ಲಾಂ ಆಕ್ರಮಣಕಾರರ ದೌರ್ಜನ್ಯಕ್ಕೆ ಒಳಪಟ್ಟ ಸಕಲೇಶಪುರ ಮಂಜರಾಬಾದ್ ಆಯ್ತು. ಮಹಾರಾಷ್ಟ್ರದ ಧಾರಶಿವ ಉಸ್ಮಾನಾಬಾದ್ ಆಯ್ತು. ಆಂದ್ರದ ಪಾಳಾಮೋರ್ ಮೆಹ್ಬೂಬ್ನಗರ್ ಆಗಿ ಬದಲಾಯ್ತು. ಬೀದರ್ನ ಜಯಸಿಂಹಪುರ ಹುಮ್ನಾಬಾದ್ ಆಗಿದೆ. ಆಂದ್ರದ ರಾಜಧಾನಿ ಹೈದೆರಾಬಾದ್ ಗೆ ಮೊದಲಿದ್ದ ಹೆಸರು ಭಾಗ್ಯನಗರ. ದೇವಗಿರಿ ದೌಲತಾಬಾದ್, ರಾಮಾಗಢ ಅಲೀಗಢ್ ಆಗಿದೆ. ಅಕ್ಬರ್‌ನಿಂದ ಪ್ರಯಾಗ ಅಲ್ಲಹಾಬಾದ್ ಆಯ್ತು. ಕಾಶಿ ಔರಂಗಜೇಬ್ ನಿಂದ ಮಹಮ್ಮದಾಬಾದ್ ಆಯ್ತು. ಅಯೋಧ್ಯೆ ಫೈಜ಼ಾಬಾದ್ ಆಯ್ತು. ರಾಮನ ಮಗನ ರಾಜಧಾನಿ ಲವಪುರ ಲಾಹೋರ್ ಆಗಿ ಬದಲಾಯ್ತು. ಗಾಂಧಾರ ಕಂದಾಹರ್ ಆಗಿದೆ. ಕೃಷ್ಣನ ಇಂದ್ರಪಸ್ತ ದೆಹಲಿ ಆಗಿ ಬದಲಾಗಿದೆ.

ಭಾರತದ ಪ್ರತಿಯೊಂದು ಸ್ಥಳಕ್ಕೊ ಅದರದೇ ಆದ ಒಂದು ಹಿನ್ನಲೆ, ಸಂಸ್ಕೃತಿ ಇದೆ, ಹೆಸರಿಗೆ ಒಂದು ಅರ್ಥ, ಕಾರಣ ಇದೆ. ಇಷ್ಟೆಲ್ಲ ಆಕ್ರಮಣದ ನಡುವೆಯೂ ಭಾರತ ತನ್ನ ಸಂಸ್ಕೃತಿಯನ್ನು ಜತನದಿಂದ ಕಾಪಾಡಿಕೊಂಡಿದೆ. ಹೆಸರು ಬದಲಾದರೂ ಹಿನ್ನಲೆ ಬದಲಾಗುವುದಿಲ್ಲವಲ್ಲ. ಅನ್ಯರ ಧಾಳಿಯಿಂದ ಬದಲಾದ ಹೆಸರುಗಳನ್ನು ಮರುನಾಮಕರಣ ಮಾಡಬೇಕಿದೆ.

ಮೇಲಿನ ವಿವರಣೆ ಶ್ರೀ ವಿದ್ಯಾನಂದ ಶೆಣ್ಯೆ ರವರ ಭಾರತ ದರ್ಶನದಿಂದ ಸ್ಪೂರ್ತಿ ಪಡೆದಿದ್ದು. ಅಂತಹ ಮಹಾನುಭಾವರ ಪದಚರಣಕ್ಕೆ ನನ್ನ ನಮನಗಳು. 

1 ಕಾಮೆಂಟ್‌: