ಶುಕ್ರವಾರ, ಮಾರ್ಚ್ 27, 2015

Punಗತೆ - ಕೊನೇಮನೆ ಗಂಗಜ್ಜಿ

ಎಲ್ಲಾ ಕಥೆ ಹೇಗೆ ಶುರು ಆಗತ್ತೋ ಈ ಕಥೆನೂ ಹಾಗೆ ಶುರುಆಗತ್ತೆ. ಒಂದೂರು, ಊರಿನ ಕೊನೇಮನೆಲಿ ಗಂಗಜ್ಜಿ ಬದುಕಿದ್ಲು. ಗಂಡ ಮಕ್ಳು ಯಾರೂ ಇರ್ಲಿಲ್ಲ. ಕಥೆಗೆ ಅವರ ಅವಶ್ಯಕಥೆನೂ ಇಲ್ಲ ಅಂತ ಇಟ್ಕೊಳಿ.
ಆದ್ರೂ ಅಜ್ಜಿ ಐಶ್ವರ್ಯಕ್ಕೇನೂ ಕಡಿಮೆ ಇರ್ಲಿಲ್ಲ. ಗಂಡ ಮಾಡಿಟ್ಟ ಆಸ್ತಿ ಇತ್ತು, ಊರು ಚಿಕ್ಕದೇ ಆದ್ರೂ ಇದ್ದವ್ರೆಲ್ಲ ಬಡವರೇ. ಅಜ್ಜಿ ಅವ್ರಿಗೆಲ್ಲ ಸಾಲ ಕೊಟ್ಟು ಮೆರೀತಿತ್ತು.

ಇಂಥ ಅಜ್ಜಿ ಒಂದಿನ ಕಣ್ಣು ಮುಚ್ತು. ಸುದ್ದಿ ಊರಿಗೆಲ್ಲ ಹಬ್ಬಿತು. ಊರಿನ ಯುವಕರು ಮಕ್ಳು ಎಲ್ಲ ಸೇರಿದ್ರು. ಎಷ್ಟೇ ಆದ್ರು ನಮಗೆಲ್ಲ ಸಹಾಯ ಮಾಡಿದೋಳು, ಸರಿಯಾಗಿ ಮಣ್ಣು ಮಾಡೋಣ ಅಂತ ಮಾತಾಡ್ಕೊಂಡ್ರು. ಚಟ್ಟ ಅದು ಇದು ತಯಾರಿನೂ ಆಯ್ತು. ಅಷ್ಟು ಹೊತ್ತಿಗೆ ಸೂರ್ಯ ಮುಳುಗಿಹೋದ. ಊರವ್ರಿಗೆಲ್ಲ ಹಸಿವು ನಿದ್ದೆ ಬಂದಿತ್ತು. ಅಜ್ಜಿ ಹೆಣ ಇಲ್ಲೇ ಇರ್ಲಿ, ನಾಳೆ ಮುಂದಿನ ಕಾರ್ಯ ಮಾಡೋಣ, ಯಾರಾದ್ರೂ ಒಬ್ರು ಇಲ್ಲೇ ಇರೋದು ಆಂತ ನಿರ್ಧಾರ ಆಯ್ತು.

ಆದ್ರೆ ಹೆಣದ ಜೊತೆ ಯಾರು ಮಲಗ್ತಾರೆ? ಸಾಲಕ್ಕೆ ನಾ ಮುಂದು ಅಂತಿದ್ದ ಜನ ಆಗ್ಲೇ ಮನೆ ಸೇರ್ಕೊಂಡಿದ್ರು. ಕೊನೇಗೆ ಇನ್ನೊಂದು ಅಜ್ಜಿ ನಾನಿರ್ತೀನಿ, ನೀವೆಲ್ಲ ಬೆಳಗ್ಗೆ ಬೇಗ ಬಂದುಬಿಡಿ ಅಂತ ಅಲ್ಲೇ ಮಲ್ಕೊಳ್ತು.

ಮಧ್ಯರಾತ್ರಿ ಅಜ್ಜಿಗೆ ಯಾಕೋ ಎಚ್ಚರ ಆಯ್ತು. ಹೆಣ ನೋಡ್ತಾಳೆ, ಕತ್ತಲಲ್ಲಿ ಹೆಣ ಅಲುಗಾಡ್ತಾ ಇದೆ. ಘಾಟಿ ಅಜ್ಜಿ ಮೊದಲು ನಂಬ್ಲಿಲ್ಲ. ಸ್ವಲ್ಪ ಹೊತ್ತು ಬಿಟ್ಟು ನೋಡಿದ್ಲು ಹೆಣ ನಿಜವಾಗ್ಲೂ ಅಲುಗಾಡ್ತಾ ಇದೆ. ಅಜ್ಜಿಗೆ ಎದೆ ಧಸಕ್ಕಂತು. ಭಯ ಆಗಿ ಮೈ ಎಲ್ಲ ಬೆವರೋಕೆ ಶುರು ಆಯ್ತು, ಇಲ್ಲಿಗೆ ನನ್ನ ಆಯಸ್ಸು ಮುಗೀತು ಅಂತ ಖಾತರಿ ಆಯ್ತು. ಹಲ್ಲು ಕಟಕಟ ನಡುಕ, ತಲೆ ಕೂದ್ಲೆಲ್ಲ ನಿಂತ್ಕೊಳ್ತು. ಆದ್ರೂ ಯಾಕೋ ನಂಬಿಕೆ ಬರ್ಲಿಲ್ಲ, ಜೀವನದಲ್ಲಿ ದೆವ್ವ ಭೂತ ನಂಬಿದೋಳಲ್ಲ, ಆಗಿದ್ದು ಆಗಿ ಹೋಗ್ಲಿ ಅಂತ ಹೆಣದ ಹತ್ತಿರ ಹೋಗಿ ನೋಡ್ತಾಳೆ, ಹೆಣದ ಕೈ ಅಲುಗಾಡ್ತಾ ಇದೆ. ದೀಪ ಹಾಕಿ ನೋಡ್ತಾಳೆ, ಅವ್ಳ ಮಗ!! ಗಂಗಜ್ಜಿ ಮೈಮೇಲಿರೋ ಒಡವೆ ಕದಿಯೋಕೆ ಬಂದಿದಾನೆ.. ಈ ಅಜ್ಜಿ ಎರಡು ಬಿಟ್ಟು ಉಗಿದು ಮಗನನ್ನ ಮನೆಗೆ ಕಳುಹಿಸ್ತು
ಬೆಳಗಾಯ್ತು,

ಇದೇ ಅಜ್ಜಿ ಮಗ ತಾನೇ ಮೊದಲು ಬಂದು ಗಂಗಜ್ಜಿಯ ಕಾರ್ಯ ಎಲ್ಲ ಮುಗಿಸಿದ. ಅಜ್ಜಿಗೆ ಮಾನ ಉಳಿಸಿದ ಸಮಾಧಾನ ಆದ್ರೆ, ಮಗನಿಗೆ ಸಾರಾಯಿ ಅಂಗಡಿ ಸಾಲ ತೀರಿಸೋ ಅವಕಾಶ ತಪ್ಫೋಯ್ತಲ್ಲ ಅಂತ ಬೇಜಾರಾಯ್ತು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ